‘ಮಾಚಿದೇವ’ ತೆರೆಗೆ ಸಿದ್ದ
Posted date: 03 Thu, Mar 2016 – 11:09:41 AM

೧೨ ನೆಯ ಶತಮಾನದಲ್ಲಿ ದುರ್ಬಲರ ಶೋಷಣೆ, ಜಾತೀಯತೆ, ಮೇಲು -ಕೀಳು ತಾರತಮ್ಯ , ಅಸ್ಪ್ರುಶ್ಯತೆ , ಮೂಢ ನಂಬಿಕೆಗಳ ಸೃಷ್ಟಿ , ಶಿಕ್ಷಣದಿ ಅವಕಾಶ ವಂಚನೆ ಹೀಗೆ ಅನೇಕ ಸಾಮಾಜಿಕ ಅಸಮಾನತೆಯಿಂದ ಜನರು ತುಳಿತಕ್ಕೆ ಒಳಗಾಗಿದ್ದರು. ಇವುಗಳೆಲ್ಲವುಗಳಿಂದ ಮಹಿಳೆಯರು, ವೃತ್ತಿ ನಿರತ ಶ್ರಮಜೀವಿಗಳು , ಬಡವರು, ದೀನ ದಲಿತರು ನಿರಾಶೆ-ಹತಾಶೆಗೊಂಡು ಅಸಹನೀಯ ಬದುಕಿಗೆ ತುತ್ತಾಗಿದ್ದರು. ಸರ್ವರಿಗೂ ಸಮಪಾಲು -ಸಮಬಾಳು ಒದಗಿಸಲು ಬಸವ-ಮಾಚಿದೇವಾದಿ ಶರಣರು ಸಾಮಾಜಿಕ ಕ್ರಾಂತಿಯನ್ನೇ ಕೈಗೊಂಡರು. ಶರಣರ ಅಗ್ರ ಗಣ್ಯ ಬಳಗದಲ್ಲಿ ಮಡಿವಾಳ ಮಾಚಿದೇವ ಅತ್ಯಂತ ಪ್ರಕಾಶಮಾನವಾಗಿ ಕಂಡುಬರುವರು...
‘ಕಲ್ಯಾಣ ಕ್ರಾಂತಿ’ಯ ಸಂದರ್ಭದಲ್ಲಿ ಮಾಚಿದೆವರು ಹೊತ್ತ ಜವಾಬ್ಧಾರಿ ಗುರುತರವಾದುದು. ಶರಣ ಧರ್ಮ ಸಂರಕ್ಷಣೆ- ವಚನ ಸಾಹಿತ್ಯದ ರಕ್ಷಣೆಯ ದಂಡ ನಾಯಕತ್ವ ಜವಾಬ್ಧಾರಿ ಹೊತ್ತು , ಚನ್ನ ಬಸವಣ್ಣ , ಅಕ್ಕ ನಾಗಮ್ಮ, ಕಿನ್ನರಿ ಬೊಮ್ಮಣ್ಣ ಮೊದಲಾದವರೊಂದಿಗೆ ಮಾಚಿದೇವ ಶರಣ ಸಮೂಹದ ‘ಭೀಮ ರಕ್ಷೆಯಾಗಿ’ ನಿಂತರು. ಕಲಚೂರ್ಯ ರಾಯ ಮುರಾರಿಯನ್ನು ಎದುರಿಸಿ ಭೀಮ ನದಿಯನ್ನು ದಾಟಿ ತಲ್ಲೂರು, ಮುರಗೋಡ, ಕಡಕೋಳ,ತಡ ಕೋಡ, ಮೂಗ ಬಸವ, ಕಾತರವಳ್ಳಿಯಲ್ಲಿ ಅಲ್ಲಲ್ಲಿ ಕಾಳಗ ನಡೆಸಿದರು. ತಮ್ಮ ಧೈರ್ಯ, ಅನುಪಮ ಬಲದಿಂದ ಶರಣರನ್ನು, ವಚನ ಸಾಹಿತ್ಯವನ್ನು ರಕ್ಷಿಸಿ ಉಳಿವಿಗೆ ತಲುಪಿಸಿದ ಸಾಹಸಿ ಮಾಚಯ್ಯ.
ವಿಶ್ವ ಗುರು ಶ್ರೀ ಬಸವಣ್ಣರ ಮಹಾ ಭಕ್ತ ‘ವೀರ ಮಡಿವಾಳ ಮಾಚಿದೇವ’ ಈಗ ಸಿನಿಮಾ ರೂಪದಲ್ಲಿ ಸಿದ್ದಗೊಂಡು, ಇದೇ ತಿಂಗಳ ೧೧ರಂದು ತೆರೆಗೆ ಬರಲು ಅಣಿಯಾಗುತ್ತಿದೆ.
ಕಂಚಿನ ಕಂಠದ ಕಲಾವಿದ ಎಂದೇ ಹೆಸರಾದ ಸಾಯಿಕುಮಾರ್ ಅವರು ಮಾಚಿದೇವನಾಗಿ ಅಭಿನಯಿಸಿರುವ ಈ ಚಿತ್ರವನ್ನು ನಂದಿಕಾಮೇಶ್ವರ ರೆಡ್ಡಿ ನಿರ್ದೇಶಿಸಿದ್ದಾರೆ.  ತೆಲುಗಿನ ಹಲವಾರು ನಿರ್ದೇಶಕರ ಬಳಿ ಕೆಲಸಮಾಡಿರುವ ಇವರ ನಿರ್ದೇಶನದ ಮೊದಲ ಕನ್ನಡ ಚಿತ್ರ ಇದಾಗಿದೆ. ಶ್ರೀ ಸಿದ್ದೇಶ್ವರ ಅವರ ನಿರ್ಮಾಣದ ಈ ಚಿತ್ರಕ್ಕೆ ಗಜೇಂದ್ರ ಅವರು ಕಥೆ, ಚಿತ್ರಕಥೆ ಜೊತೆಗೆ ಗೀತರಚನೆಯನ್ನೂ ಮಾಡಿದ್ದಾರೆ.
ನಿರ್ಮಾಪಕರ ಸ್ನೇಹಿತ ಹಾಗೂ ಉದ್ಯಮಿ ಎಂಜಾರೆಪ್ಪ ಅವರ ಪುತ್ರ ಕಾರ್ತಿಕ್ ಬಾಲ ಮಾಚಿದೇವನಾಗಿ ಅಭಿನಯಸಿದ್ದಾರೆ. ಮಾಚಿದೇವ ಬಾಳಿ ಬದುಕಿದ ಸ್ಥಳಗಳಲ್ಲಿ  ಮಾತ್ರವಲ್ಲದೆ, ಪಾವಗಡ, ದೇವರಹಿಪ್ಪರಗಿ, ಚಿತ್ರದುರ್ಗ ಮುಂತಾದ ಸ್ಥಳಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ.
ಈ ಚಿತ್ರಕ್ಕೆ ನಾದ ಬ್ರಹ್ಮ ಹಂಸಲೇಖ ಅವರು ೧೩ ವಚನಗಳಿಗೆ ರಾಗ ಸಂಯೋಜನೆ ಮಾಡಿದ್ದಾರೆ. ಗಜೇಂದ್ರ ಅವರ ಸಂಭಾಷಣೆ, ರಾಮ್ ಅವರ ಛಾಯಾಗ್ರಹಣ, ಥ್ರಿಲ್ಲರ್ ಮಂಜು ಆವರ ಸಾಹಸ ಈ ಚಿತ್ರಕ್ಕಿದೆ.
ಸಾಯಿಕುಮಾರ್ ಅವರ ಜೊತೆ  ಚಾರುಲತಾ, ರಮೇಶ್ ಭಟ್, ಬಿ ಸಿ ಪಾಟೀಲ್. ವಿಜಯಕಾಶಿ, ಶ್ರೀ ನಿವಾಸಪ್ರಭು, ಸತ್ಯಜಿತ್, ಸತ್ಯಪ್ರಕಾಶ್, ಉಮೇಶ್ ಹಾಗೂ ಇತರರು ಇದ್ದಾರೆ.


Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed